ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯು (ಸ್ವೀಡನ್‌ನ ಭಾಷೆ - ) ಸ್ವೀಡನ್‌ನ ರಾಜವಂಶದ ವಿಜ್ಞಾನ ಅಕಾಡೆಮಿಯಿಂದ ವರ್ಷಕೊಮ್ಮೆ ನೀಡಲಾಗುತ್ತದೆ. ಅದು ಆಲ್‌ಫ್ರೆಡ್ ನೊಬೆಲ್‌ರ ಉಯಿಲಿನಿಂದ ೧೮೯೫ರಲ್ಲಿ ಸ್ಥಾಪಿತವಾದ ಐದು ನೊಬೆಲ್ ಪ್ರಶಸ್ತಿಗಳ ಪೈಕಿ ಒಂದು ಮತ್ತು ೧೯೦೧ರಿಂದ ನೀಡಲಾಗುತ್ತಿದೆ; ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ, ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ, ನೊಬೆಲ್ ಶಾಂತಿ ಪ್ರಶಸ್ತಿ, ಮತ್ತು ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಇತರ ಪ್ರಶಸ್ತಿಗಳು. ಭೌತಶಾಸ್ತ್ರದ ಮೊದಲ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ ವಿಲ್‌ಹೆಲ್ಮ್ ಕಾನ್ರಾಡ್ ರೆಂಟ್‌ಗನ್‌ರಿಗೆ "ಅಪೂರ್ವವಾದ ಕಿರಣಗಳ (ಅಥವಾ ಕ್ಷ-ಕಿರಣಗಳು) ಶೋಧನೆಯ ಮೂಲಕ ಅವರು ಸಲ್ಲಿಸಿದ ಅಸಾಮಾನ್ಯವಾದ ಸೇವೆಗಳ ಗೌರವಾರ್ಥವಾಗಿ" ನೀಡಲಾಗಿತ್ತು. ಪ್ರಶಸ್ತಿಯನ್ನು ಸ್ವೀಡನ್ ರಾಜಧಾನಿ ಸ್ಟಾಕ್‍ಹೋಮ್ ನಗರದಲ್ಲಿ ಆಲ್‌ಫ್ರೆಡ್ ನೊಬೆಲ್‌ರ ಸಾವಿನ ವಾರ್ಷಿಕೋತ್ಸವವಾದ ಡಿಸೆಂಬರ್ ೧೦ರಂದು ನೀಡಲಾಗುತ್ತದೆ. ೨೦೧೭ರವರೆಗೆ ೨೦೬ ವ್ಯಕ್ತಿಗಳು ಪುರಸ್ಕೃತರಾಗಿದ್ದಾರೆ. == ೨೦೧೬ನೇ ಸಾಲಿನ ಭೌತಶಾಸ್ತ್ರ ಪ್ರಶಸ್ತಿ == ಅತ್ಯಾಧುನಿಕ ಗಣಿತೀಯ ವಿಧಾನಗಳನ್ನು ಬಳಸಿ ಭಿನ್ನ ಹಂತಗಳಲ್ಲಿ ಭೌತವಸ್ತುಗಳ ಅಧ್ಯಯನದ ಸಾಧ್ಯತೆಯನ್ನು ಹೊರ ತಂದಿರುವ ವಿಜ್ಞಾನಿಗಳಿಗೆ 2016ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಘೋಷಿಸಲಾಗಿದೆ. ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿತ್ತಿರುವ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ಹಂಚಿಕೆಯಾಗಿದೆ. ವಿಜ್ಞಾನಿಗಳ ಪರಿಚಯ: ಡೇವಿಡ್‌ ಜೆ. ಥೌಲೆಸ್, ವಾಷಿಂಗ್ಟನ್ ವಿಶ್ವವಿದ್ಯಾಲಯ, ಅಮೆರಿಕ(ಪ್ರಶಸ್ತಿಯ ಅರ್ಧ ಭಾಗ) ಜನನ: 1934, ಬರ್ಸ್ಡನ್, ಯು.ಕೆ. ಎಫ್.ಡಂಕನ್ ಎಂ.ಹಲ್ಡೇನ್‌, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ, ಅಮೆರಿಕ ಜನನ: 1951, ಲಂಡನ್‌ ಜೆ.ಮೈಕೆಲ್ ಕೋಸ್ಟೆರ್‌ಲಿಟ್ಸ್‌, ಬ್ರೌನ್‌ ವಿಶ್ವವಿದ್ಯಾಲಯ, ಅಮೆರಿಕ ಜನನ: 1942, ಅಬೆರ್ದಿನ್‌, ಯು.ಕೆ ಸಂಶೋಧನೆ: ಭಿನ್ನ ಹಂತಗಳಲ್ಲಿ ಆಕೃತಿಯ ಜ್ಯಾಮಿತೀಯ ಲಕ್ಷಣಗಳನ್ನು ಅಧ್ಯಯನ ಮಾಡುವುದಕ್ಕೆ ಸಂಬಂಧಿಸಿದಂತೆ (ಟೊಪಾಲಜಿಕಲ್ ಫೇಸ್‌) ಭೌತವಸ್ತು ಹಾಗೂ ಪರಿವರ್ತನೆ ಗಳ ಸೈದ್ಧಾಂತಿಕ ಸಂಶೋಧನೆಗಾಗಿ ಭೌತಶಾಸ್ತ್ರ ನೊಬೆಲ್‌ ಘೋಷಿಸಲಾಗಿದೆ. == ಬಾಹ್ಯ ಸಂಪರ್ಕಗಳು == " " - . " " – . " " 2017-07-16 ವೇಬ್ಯಾಕ್ ಮೆಷಿನ್ ನಲ್ಲಿ. - . " " – . == ನೋಡಿ == ನೊಬೆಲ್ ಪ್ರಶಸ್ತಿ ೨೦೦೯ ರ ನೋಬೆಲ್ ಪ್ರಶಸ್ತಿ ವಿಜೇತರು ಭೌತಶಾಸ್ತ್ರ == ಉಲ್ಲೇಖ ==